Friday 17 January 2014

ಮೊಟ್ಟೆ 
ಹೊರಗಿನಿಂದ ಒಡೆದರೆ 
ಹಾಳು 
ಒಳಗಿನಿಂದ ಒಡೆದರೆ 
ಬಾಳು 

Thursday 25 August 2011

hanigalu

ಸಣ್ಣದು ಸಣ್ಣದು ಎಂದು 
 ಮೂಗು ಮುರಿಯಬೇಡ 
ಮನೆಯಂಗಳದಲ್ಲಿ ನೆಡುವುದು 
 ಆಲದಮರವನ್ನಲ್ಲ 
ತುಳಸಿಗಿಡ




ಗಾಳಿ ಎಷ್ಟೇ ಇರಲಿ ಹೊರಗೆ 
ಚಕ್ರದೊಳಗೆ ಇಲ್ಲದಿರೆ 
ಗಾಡಿ ಸಾಗುವುದು ಹೇಗೆ ?
***********
ಬೆಳಕು ಎಷ್ಟೇ ಇರಲಿ ಹೊರಗೆ 
ಮನದೊಳಗೆ ಇಲ್ಲದಿರೆ 
ಬದುಕು ಸಾಗುವುದು ಹೇಗೆ?

ಮೊಟ್ಟೆ 
ಹೊರಗಿನಿಂದ ಒಡೆದರೆ 
ಹಾಳು 
ಒಳಗಿನಿಂದ ಒಡೆದರೆ 
ಬಾಳು 

ಬಟ್ಟಲಲ್ಲಿ ನೀರಿಟ್ಟುಕೊಂಡು 
ಬೆಳದಿಂಗಳಿಗೆ ಬಂದೆ 
ಪ್ರತಿಫಲಿಸಿದ ಚಂದ್ರನನ್ನು 
ಗುಟುಕು ಗುಟುಕಾಗಿ ಹೀರಿದೆ 
ಈಗ ನನ್ನೊಳಗೆಲ್ಲ 
ಬೆಳದಿಂಗಳಿನ ಮಾಯೆ!


ನನ್ನ ಬ್ಲಾಗ್ ನ ಗೃಹ ಪ್ರವೇಶಕ್ಕೆ ಎಲ್ಲರಿಗೂ ಸ್ವಾಗತ.  ಇದು ನನ್ನ ಮನೆಯ ಹಾಗೆ ನಿಮ್ಮ ಮನೆಯೂ ಹೌದು.